ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

ಒಳಾಡಳಿತ ಇಲಾಖೆ

      ಒಳಾಡಳಿತ ಇಲಾಖೆಯು ಸಾಮಾನ್ಯ ಆಡಳಿತದಡಿ ರಚಿಸಲಾಗಿದ್ದು, ದಿನಾಂಕ 01.04.1952 ರಿಂದ ಕಾರ್ಯನಿರ್ವಹಿಸುತ್ತಿದೆ. ಇಲಾಖೆಯು ಆಂತರಿಕ ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆಯ ಆಡಳಿತ, ಅಪರಾಧಿಕ ನ್ಯಾಯ ಮತ್ತು ಬಾಹ್ಯ ಬೆದರಿಕೆಯ ಹೊಣೆ ಹೊಂದಿದೆ. ಇಲಾಖೆಯು ಸಹಾಯಕ ಸೇವೆಗಳಾದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಕಾರಾಗೃಹ, ಗೃಹ ರಕ್ಷಕದಳ ಮತ್ತು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಗಳಿಗೆ ಸಂಬಂಧಪಟ್ಟಿದೆ. ಒಳಾಡಳಿತ ಇಲಾಖೆಯು ಅತ್ಯಂತ ಹಳೆಯ ಇಲಾಖೆಗಳಲ್ಲಿ ಒಂದಾಗಿದ್ದು, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ, ಸಾರ್ವಜನಿಕರ ಭದ್ರತೆ, ಸಾರ್ವಜನಿಕರ ಉಪಯುಕ್ತತೆ ಹಾಗೂ ಸಾರ್ವಜನಿಕರ ಆದೇಶಗಳನ್ನೊಳಗೊಂಡಿದೆ. 

 

I.  ಒಳಾಡಳಿತ ಇಲಾಖೆಯ ಪಾತ್ರ:

     ಒಳಾಡಳಿತ ಇಲಾಖೆಯ ಅಪರಾಧ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರವನ್ನು ರ್ನಿವಹಿಸುತ್ತಿದೆ. ಪೊಲೀಸ್ ಇಲಾಖೆ, ಕಾರಾಗೃಹ ಇಲಾಖೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಗೃಹರಕ್ಷಕ ಮತ್ತು ಪೌರರಕ್ಷಣೆ ಇಲಾಖೆ, ಅಭಿಯೋಗಗಳು ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭೀವೃದ್ದಿ ನಿಗಮ ನಿಯಮಿತ ಅಡಳಿತದ ಉಸ್ತುವಾರಿ ಮತ್ತು ನಿರ್ವಹಣೆ ಈ ಇಲಾಖೆಯದಾಗಿರುತ್ತದೆ.         

     ಒಳಾಡಳಿತ ಇಲಾಖೆಯ ರಾಜ್ಯದ ಅಂತರಿಕ ಭದ್ರತೆಯ ಜೊತೆಗೆ ಕೇಂದ್ರ ಸರ್ಕಾರದೊಂದಿಗೆ ಸಮನ್ವಯವನ್ನು ಸಾಧಿಸಿಕೊಂಡು ವ್ಯವಹರಣೆಯನ್ನು ನಡೆಸುತ್ತದೆ. ಈ ಇಲಾಖೆಯು ತನ್ನ ಅಧೀನದಲ್ಲಿ ಬರುವ ಇತರ ಇಲಾಖೆಗಳೊಂದಿಗೆ ಸಮನ್ವಯವನ್ನು ಸಾಧಿಸಿ ಅವುಗಳ ಅಡಳೀತ ಮತ್ತು ಶಿಸ್ತು ವಿಷಯಗಳ ಬಗ್ಗೆ ಅಯಾ ಇಲಾಖೆಗಳ ಮುಖ್ಯ್ಥರಿಗೆ ಮಾರ್ಗದರ್ಶನ ನೀಡುವ ಮೂಲಕ ಅಯಾ ಇಲಾಖೆಗಳಿಗೆ ಸಂಬಂದಿಸಿದ ಆಯವ್ಯಯ, ಯೋಜನೆಗಳು ಕಾರ್ಯಗತವಾಗಲು ಮಾರ್ಗದರ್ಶನ ನೀಡುವುದರ ಜೊತೆಗೆ ಶಾಸಕಾಂಗದ ಎಲ್ಲಾ ನಿರ್ದೇಶನಗಳನ್ನು ಇಲಾಖೆ ಇತರ ವಿಭಾಗಗಳಿಗೆ ತಲುಪಿಸುವ ಮತ್ತು ಅದರ ನಿರ್ದೇಶನಗಳು ಪಾಲನೆಯಾಗುವಂತೆ ನೋಡಿಕೊಳ್ಳುತ್ತದೆ. 

   ಗೃಹಸಚಿವರು ಈ ವಿಭಾಗದ ಮುಖ್ಯಸ್ಥರಾಗಿರುತ್ತಾರೆ. ಅಪರ ಮುಖ್ಯ ಕಾರ್ಯದರ್ಶಿಗಳು / ಸರ್ಕಾರದ ಪ್ರಧಾನ ಕಾರ್ಯದರ್ಶಿ ಈ ಇಲಾಖೆಯ ಎಲ್ಲಾ ರೀತಿಯ ಮೇಲ್ವಿಚಾರಣೆಗಳನ್ನು ನೋಡಿ ಕೊಳ್ಳುತ್ತಾರೆ ಪೊಲೀಸ್ ಅಗ್ನಿಶಾಮಕ ಮತ್ತು ತುರ್ತು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ದಿ ನಿಗಮ ಈ ವಿಭಾಗಗಳಿಗೆ ಪ್ರಧಾನ ಕಾರ್ಯದರ್ಶಿಗಳು ನೆರವು ನೀಡಲು ಪ್ರತಿಯೊಂದು ವಿಭಾಗಕ್ಕೆ ಉಪ ಕಾರ್ಯದರ್ಶಿಯವರು ಕಾರ್ಯನಿರ್ವಹಿಸುತ್ತಿರುತ್ತಾರೆ.

II. ಕಾರ್ಯಗಳು ಮತ್ತು ಕರ್ತವ್ಯಗಳು

ಒಳಾಡಳಿತ ಇಲಾಖೆಯ ಕಾರ್ಯಗಳು ಮತ್ತು ಕರ್ತವ್ಯಗಳು ಈ ಕೆಳಕಂಡಂತಿವೆ:

(1) ಪೊಲೀಸ್ ಸೇವೆಗಳು - ಎ ಶಾಖೆ 

ಅ) ಕೆ.ಎಸ್.ಆರ್.ಪಿ. ಒಳಗೊಂಡಂತೆ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ವಿವಿಧ ವೃಂದದ ಹೆಚ್ಚುವರಿ ಪೊಲೀಸ್ ಅಧೀಕ್ಷಕರು (ನಾನ್ ಐಪಿಎಸ್), ಪೊಲೀಸ್ ಉಪಾಧೀಕ್ಷಕರು, ಆರಕ್ಷಕ ನಿರೀಕ್ಷಕರು, ಆರಕ್ಷಕ ಉಪ ನಿರೀಕ್ಷಕರು, ಸಹಾಯಕ ಆರಕ್ಷಕ ನಿರೀಕ್ಷಕರು ಇವರುಗಳ ಸೇವಾ ವಿಷಯಗಳು

ಆ) ಪೊಲೀಸ್ ಇಲಾಖೆಯ ಮುಖ್ಯ ಆಡಳಿತಾಧಿಕಾರಿ, ಆಡಳಿತಾಧಿಕಾರಿ, ಸಹಾಯಕ ಆಡಳಿತಾಧಿಕಾರಿ ಹಾಗೂ ಲಿಪಿಕ ಸಿಬ್ಬಂದಿಗಳ ಸೇವಾ ವಿಷಯಗಳು

ಇ) ನ್ಯಾಯ ವಿಜಾನ ಪ್ರಯೋಗಾಲಯದ ನಿರ್ದೇಶಕರ ಹುದ್ದೆಯನ್ನೊಳಗೊಂಡಂತೆ ಎಲ್ಲಾ ಸಿಬ್ಬಂದಿಗಳ ಸೇವಾ ವಿಷಯಗಳು

ಈ) ಪೊಲೀಸ್ ಇಲಾಖೆಯ ಎ ವೃಂದದ (ನಾನ್ ಐಪಿಎಸ್), ಬಿ ಮತ್ತು ಸಿ ವೃಂದದ ಅಧಿಕಾರಿ / ಸಿಬ್ಬಂದಿಗಳ ನ್ಯಾಯಾಲಯ ಪ್ರಕರಣಗಳು ಮತ್ತು ಮೇಲ್ಕಂಡ ಸಿಬ್ಬಂದಿಗಳ ಕುರಿತು ಶಾಸನ ಮತ್ತು ಕಾನೂನು ರಚನೆ ವಿಷಯಗಳು (ಪೊಲೀಸ್ ಸೇವೆಗಳು-ಬಿ)

 

(2) ಪೊಲೀಸ್ ಸೇವೆಗಳು - ಬಿ ಶಾಖೆ 

ಅ) ಪೊಲೀಸ್ ಇಲಾಖೆಯ ಸಿವಿಲ್ / ಕರ್ನಾಟಕ ರಾಜ್ಯ ಮೀಸಲು ಪೊಲೀಸ್ / ರಾಜ್ಯ ಗುಪ್ತಚರ ಇಲಾಖೆ ಹಾಗೂ ಇನ್ನಿತರೆ ವಿವಿಧ ಟಕಗಳ ಹೆಡ್ ಕಾನ್ಸ್ಟೇಬಲ್ ಮತ್ತು ಕಾನ್ಸ್ಟೇಬಲ್ ವೃಂದದ ಸಿಬ್ಬಂದಿಗಳ ಸೇವಾ ವಿಷಯಗಳು.

ಆ) ಭಾರತೀಯ ಪೊಲೀಸ್ ಸೇವೆಯನ್ನು ಒಳಗೊಂಡ ಪೊಲೀಸ್ ಅಧಿಕಾರಿಗಳನ್ನೊಳಗೊಂಡಂತೆ ಮಾನ್ಯ ರಾಷ್ಟ್ರಪತಿಗಳ ಶ್ಲಾನೀಯ / ವಿಶಿಷ್ಟ ಸೇವಾ ಪದಕಗಳ ವಿಷಯಗಳು ಹಾಗೂ ಮುಖ್ಯಮಂತ್ರಿ ಪದಕ ಮತ್ತು ನಗದು ಬಹುಮಾನಗಳ ವಿಷಯಗಳು (ಪೊಲೀಸ್ ಸೇವೆಗಳು-ಎ)

ಇ) ಪೊಲೀಸ್ ಸಿಬ್ಬಂದಿ / ಮೀಸಲು ಪೊಲೀಸ್ ಮತ್ತು ಇತರೆ ಸಿಬ್ಬಂದಿಗಳ ತರಬೇತಿ

ಈ) ಕರ್ನಾಟಕ ಪೊಲೀಸ್ ಕಾಯ್ದೆಯಡಿ ಪೊಲೀಸ್ ಸಿಬ್ಬಂದಿಗಳು ಸಲ್ಲಿಸುವ ಪರಿಷ್ಕರಣ ಮೇಲ್ಮನವಿಗಳು

ಉ) ಪೊಲೀಸ್ ಸಿಬ್ಬಂದಿಗಳ ವಿರುದ್ಧದ ದೂರುಗಳು

ಊ) ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಇಲ್ಲಿನ ಸಿಬ್ಬಂದಿಗಳ ಸೇವಾ / ಆಡಳಿತಾತ್ಮಕ ವಿಷಯಗಳು

 

 (3) ಪೊಲೀಸ್ ಸಹಾಯಕ ಸೇವೆಗಳು 

(ಅ) ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಗೃಹರಕ್ಷಕದಳ ಮತ್ತು ಪೌರ ರಕ್ಷಣಾ ಇಲಾಖೆ ಹಾಗೂ ಸೈನಿಕ ಕಲ್ಯಾಣ ಮತ್ತು ಪುನರ್ ವಸತಿ ಇಲಾಖೆಯ ಗೆಜೆಟೆಡ್-ನಾನ್-ಗೆಜೆಟೆಡ್ ಸಿಬ್ಬಂದಿಗಳ ಸೇವಾ ವಿಷಯಗಳು.

(ಆ) ಸೈನಿಕ ಕಲ್ಯಾಣ ಮಂಡಳಿ, ಜಿಲ್ಲಾ ಕಲ್ಯಾಣ ಮಂಡಳಿ ಮಿಲಿಟರಿ ಶಾಖೆ ಮತ್ತು ಮಾಜಿ ಸೈನಿಕರ ವಿಷಯಗಳು.

(ಇ) ಅಗ್ನಿಶಾಮಕ, ಗೃಹ ರಕ್ಷಕ ಮತ್ತು ಪೌರ ರಕ್ಷಣಾ ಇಲಾಖೆಯ ನ್ಯಾಯಾಲಯ ಪ್ರಕರಣಗಳು.

 

 (4) ಪೊಲೀಸ್ ವೆಚ್ಚ 

(ಅ) ಪೊಲೀಸ್ ಠಾಣೆಗಳ/ಹೊರಠಾಣೆಗಳ ಮಂಜೂರಾತಿ.

(ಆ) ಪೊಲೀಸ್ ಇಲಾಖೆ/ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಬಜೆಟ್/ಆಯವ್ಯಯ.

(ಇ) ಪೊಲೀಸ್ ಪಡೆಗಳ ಆಧುನೀಕರಣ

(ಈ) ಪೊಲೀಸ್ ವಸತಿ ಗೃಹಗಳ ನಿರ್ಮಾಣ

(ಉ) ಉಪಕರಣಗಳು/ಕಿಟ್ಗಳ ಖರೀದಿ ಮತ್ತು ಖರ್ಚುಗಳಿಗಾಗಿ ಅನುದಾನದ ಬಿಡುಗಡೆ ಹಾಗೂ ಪೊಲೀಸ್ ಇಲಾಖೆ ಮತ್ತು ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮಗಳ ವೆಚ್ಚಕ್ಕೆ ಪ್ರಸ್ತಾವನೆಗಳು.

(ಊ) ವಾಹನ ಖರೀದಿ, ರಿಪೇರಿ ಮತ್ತು ಪೊಲೀಸ್ ಭೂಮಿ/ಜಮೀನಿಗೆ ಸಂಬಂಧಿಸಿದ ವಿಷಯಗಳು.

(ಋ) ಹುದ್ದೆಗಳ ಸೃಜನೆ ಮತ್ತು ಮುಂದುವರಿಕೆ. 

 

5) ಸೆರೆಮನೆ ಮತ್ತು ಸಿನಿಮಾ

ಅ) ಕಾರಾಗೃಹ ಇಲಾಖೆಯ ಪತ್ರಾಂಕಿತ ಸಿಬ್ಬಂದಿ ಸೇವಾ ವಿಷಯಗಳು.

ಆ) ಜೈಲು ಕಟ್ಟಡಗಳ ನಿರ್ಮಾಣ ಮತ್ತು ಬಂದಿಗಳ ಸಮವಸ್ತ್ರಗಳು, ಆಹಾರ ಹಾಗೂ ಬಂದಿಗಳ ಬಿಡುಗಡೆ.

ಇ) ಬಂದಿಗಳ ಪೆರೋಲ್, ಸ್ಥಾಯಿ ಸಲಹಾ ಮಂಡಳಿಗಳು ಮತ್ತು ಕಾರಾಗೃಹಗಳ ಅಧಿಕಾರೇತರ ಸಮಿತಿ.

ಈ) ಸಿನಿಮಾ ವಿಷಯಗಳು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಪ್ರಕರಣಗಳು.

 

(6) ಸ್ವೀಕೃತಿ ಮತ್ತು ರವಾನೆ ಶಾಖೆ 

ಅ) ಒಳಾಡಳಿತ ಇಲಾಖೆಗೆ ಸಂಬಂಧಿಸಿದ ಸ್ವೀಕೃತಿಗಳನ್ನು ಸ್ವೀಕರಿಸುವುದು ಹಾಗೂ ರವಾನಿಸುವುದು.

ಆ) ಸ್ವೀಕೃತಿ ಪತ್ರಗಳನ್ನು ಸಂಬಂಧಿಸಿದ ಶಾಖೆಗೆ ಗುರುತಿಸಿ ರವಾನಿಸುವುದು ಹಾಗೂ ಸಚಿವಾಲಯದ ಇತರೆ ಇಲಾಖೆಗಳಿಗೆ ಟಪಾಲು ಮತ್ತು ಇತರೆ ಪ್ರತಿಗಳನ್ನು ರವಾನಿಸುವುದು.

ಇ) ಒಳಾಡಳಿತ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರ ಸೇವಾ ವಿಷಯಗಳು.

ಈ) ಶಾಖೆಗಳಿಗೆ ಲೇಖನಾ ಸಾಮಗ್ರಿಗಳನ್ನು ಪೂರೈಸುವುದು.

 

(7) ಸಮನ್ವಯ ಶಾಖೆ 

ಅ) ಒಳಾಡಳಿತ ಇಲಾಖೆಗೆ ಸಂಬಂಧಪಡುವ ಎಲ್ಲಾ ಸಮನ್ವಯ ವಿಷಯಗಳು.

ಆ) ವಿಧಾನ ಮಂಡಲಕ್ಕೆ ಸಂಬಂಧಿಸಿದ ವಿಷಯಗಳು.

ಇ) ಆಯವ್ಯಯ ಹಾಗೂ ಎಲ್ಲಾ ಇಲಾಖೆಗಳಿಂದ ಸಾಮಾನ್ಯ ಮಾಹಿತಿ ಸಂಗ್ರಹಣೆ.

ಈ) ಇಲಾಖಾ ಮುಖ್ಯಸ್ಥರ ವಾರ್ಷಿಕ ವರದಿ ರಾಜ್ಯಪಾಲರ ಭಾಷಣಕ್ಕೆ ಕ್ರೊಢೀಕರಣ ಮಾಹಿತಿ ಹಾಗೂ ಇತರೆ ಸಾಮಾನ್ಯ ವರದಿಗಳು.

ಉ) ಪತ್ರ ಹಾಗೂ ಕಡತ ನಿರ್ವಹಣ ಪದ್ದತಿಯ ಬಗ್ಗೆ ಸಭೆ ಏರ್ಪಡಿಸುವುದು.

 

(8) ಅಪರಾಧ-ಎ 

ಅ) ಸಿಐಡಿಗೆ ವಹಿಸಿರುವ ಪ್ರಕರಣಗಳು, ವರದಕ್ಷಿಣೆ ಸಾವಿನ ಪ್ರಕರಣಗಳು, ಇತರೆ ಅಸಹಜ ಸಾವು ಪ್ರಕರಣಗಳು

ಆ) ಲಾಕ್ಅಪ್ ಡೆತ್ ಪ್ರಕರಣಗಳು,

ಇ) ಎನ್ಹೆಚ್ಆರ್ಸಿ,  ಕೆಹೆಚ್ಆರ್ಸಿ ಪ್ರಕರಣಗಳು, ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂಪಡೆಯುವ ಬಗ್ಗೆ,

ಈ) ಅಭಿಯೋಜನಾ ಮಂಜೂರಾತಿಗೆ ಸಂಬಂಧಿಸಿದ ವಿಷಯಗಳು,

ಉ) ಎಸ್ಸಿ/ಎಸ್ಟಿ ವಿಷಯಗಳು,

ಊ) ಕಾಪಿರೈಟ್ ವಿಷಯಗಳು, ಮಹಿಳಾ ಮತ್ತು ಮಕ್ಕಳ ದೌರ್ಜನ್ಯಕ್ಕೆ ಸಂಬಂಧಿಸಿದ ವಿಷಯಗಳು.

ಋ) ಹಣಕಾಸು ರಹಿತ ಬ್ಯಾಂಕು ಸಂಸ್ಥೆಗಳ ವಿರುದ್ಧದ ದೂರುಗಳು

 

(9) ಅಪರಾಧ-ಬಿ 

ಅ) ಅಪರಾಧಿಕ ವಿಷಯಗಳಿಗೆ ಸಂಬಂಧಿಸಿದಂತೆ, ಸರ್ವೋಚ್ಛ ನ್ಯಾಯಾಲಯ ಮತ್ತು ಉಚ್ಛ ನ್ಯಾಯಾಲಯದಲ್ಲಿನ ರಿಟ್ ಅರ್ಜಿಗಳು,

ಆ) ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಹೂಡಲಾಗಿರುವ ಅಪರಾಧಿಕ ಪ್ರಕರಣಗಳು

ಇ) ಅಪರಾಧಿಕ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ  ಮನವಿಗಳು

ಈ) ಇತರೆ ಅಪರಾಧಿಕ ವಿಷಯಗಳು

 

 (10) ಕಾನೂನು ಮತ್ತು ಸುವ್ಯವಸ್ಥೆ - ಎ ಶಾಖೆ 

ಅ) ಕರ್ನಾಟಕ ಕಳ್ಳಭಟ್ಟಿ ಸಾರಾಯಿ ವ್ಯವಹಾರ, ಔಷದಾಪರಾಧ, ಜೂಜುಕೋರ, ಗೂಂಡಾ, ಅನೈತಿಕ ವ್ಯವಹಾರಗಳ ಅಪರಾಧ, ಕೊಳಚೆ ಪ್ರದೇಶಗಳನ್ನು ಆಕ್ರಮಿಸಿಕೊಳ್ಳುವ ಮತ್ತು ವಿಡಿಯೊ ಅಥವಾ ಆಡಿಯೊ ಪೈರೇಟ್ಸ್ ಚಟುವಟಿಕೆಗಳ ತಡೆ ಅಧಿನಿಯಮ 1985ಗಳಿಗೆ ಸಂಬಂಧಿಸಿದ ಪ್ರಕರಣಗಳು.

ಆ) ವೀರಪ್ಪನ್ಗೆ ಪ್ರಕರಣಕ್ಕೆ ಸಂಬಂಧಿಸಿದ ವಿಷಯಗಳು

ಇ) ಸಾರ್ವಜನಿಕ ಆಸ್ತಿ ಮತ್ತು ಜೀವ ಸುರಕ್ಷಣೆ ಸಂಬಂಧಿಸಿದ ವಿಷಯಗಳು

ಈ) ಪ್ರಮುಖ ಹಬ್ಬಗಳಿಗೆ ಆದೇಶ ಹೊರಡಿಸುವುದಕ್ಕೆ ಸಂಬಂಧಿಸಿದ ವಿಷಯಗಳು

ಉ) ರಾಜ್ಯಕ್ಕೆ ಆಗಮಿಸುವ ಅತಿ ಮುಖ್ಯ ಗಣ್ಯರ ರಕ್ಷಣೆಗೆ ಸಂಬಂಧಿಸಿದ ವಿಷಯಗಳು

ಊ) ನಿಷೇಧಿತ ಪ್ರದೇಶವೆಂದು ೋಷಿಸುವ ವಿಷಯಗಳಿಗೆ ಸಂಬಂಧಿಸಿದಂತೆ

ಋ) ಭಯೋತ್ಪಾಧಕ ಮತ್ತು ವಿಚ್ಛಿದ್ರಕಾರಕ ಚಟುವಟಿಕೆಗಳ ಪ್ರಕರಣಗಳಿಗೆ ಸಂಬಂಧಿಸಿದ ವಿಷಯಗಳು.

ಎ) ರಕ್ಷಣೆಗೆ ಸಂಬಂಧಿಸಿದ ವಿಷಯಗಳು

ಏ) ಜಿಲ್ಲಾ ಅಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದ ವಿಷಯಗಳು

ಐ) ಭಾರತೀಯ ದಂಡ ಸಂಹಿತೆ 153 (ಎ) ಮತ್ತು (ಬಿ)ರಡಿಯಲ್ಲಿ ನೊಂದಣಿಯಾದ ಪ್ರಕರಣಗಳ ವಿವರಗಳನ್ನು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡುವ ವಿಷಯಗಳಿಗೆ ಸಂಬಂಧಿಸಿದಂತೆ

ಒ) ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ಅಗತ್ಯ ಸೇವಾ ನಿರ್ವಹಣಾ ಕಾಯ್ದೆ ವಿಷಯಗಳಿಗೆ ಂಬಂಧಿಸಿದಂತೆ.

ಓ) ಭಯೋತ್ಪಾದನೆಗೆ ಸಂಬಂಧಿಸಿದ ಪ್ರಸ್ತಾವನೆಗಳು

ಔ) ಬೆಂಗಳೂರು ಮತ್ತು ಬೆಂಗಳೂರು ಗ್ರಾಮೀಣ ಜಿಲ್ಲೆ ಮತ್ತು ರಿಟ್ ಪ್ರಕರಣಗಳಿಗೆ ಸಂಬಂಧಿಸಿದ ಕಾನೂನು &ಸುವ್ಯವಸ್ಥೆ ಕಡತಗಳು

ಅಂ) ರಾಷ್ಟ್ರೀಯ ಪರಿಹಾರ ನಿಧಿಯಿಂದ ಕೋಮು ಸೌಹಾರ್ಧ ವಿಷಯ, ಕೋಮು ಗಲಭೆ ಸಂತ್ರಸ್ತರಿಗೆ ಪರಿಹಾರ ಒದಗಿಸುವುದು ಕಡತಗಳು ಮತ್ತು ಕಬೀರ್ ಪ್ರಶಸ್ತಿ ವಿಷಯ.

 

 (11) ಕಾನೂನು ಮತ್ತು ಸುವ್ಯವಸ್ಥೆ - ಬಿ ಶಾಖೆ 

ಅ) ವಿಚಾರಣಾ ಆಯೋಗಗಳ ಸ್ಥಾಪನೆ ಮಾಡುವುದು ಮತ್ತು ವಿಚಾರಣಾ ಆಯೋಗಗಳ ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ.

ಆ) ಅತಿ ಮುಖ್ಯ ವ್ಯಕ್ತಿಗಳ ರಕ್ಷಣೆ ಮತ್ತು ಭದ್ರತಾ ವಿಷಯಕ್ಕೆ ಸಂಬಂಧಿಸಿದಂತೆ

ಇ) ಧೂಮಪಾನ ನಿಷೇಧ ವಿಷಯಗಳಿಗೆ ಸಂಬಂಧಿಸಿದಂತೆ

ಈ) ಬ್ಯಾಂಕ್ ಭದ್ರತಾ ವಿಷಯಗಳಿಗೆ ಸಂಬಂಧಿಸಿದಂತೆ

ಉ) ವಾರ್ ಬುಕ್ ವಿಷಯಕ್ಕೆ ಸಂಬಂಧಿಸಿದಂತೆ

ಊ) ಶಸ್ತ್ರಾಸ್ತ್ರ ಕಾಯ್ದೆಯಡಿ ನಮೂನೆ-11, 12ಕ್ಕೆ ಹೊಸದಾಗಿ ಅನುಮತಿ ನೀಡುವ ವಿಷಯಗಳಿಗೆ ಸಂಬಂಧಿಸಿದಂತೆ

ಋ) ನಮೂನೆ-9ರ ನವೀಕರಣ ವಿಷಯಕ್ಕೆ ಸಂಬಂಧಿಸಿದಂತೆ

ಎ) ಶಸ್ತ್ರ ಪರವಾನಗಿಗಳ ನವೀಕರಣಕ್ಕೆ ಸಂಬಂಧಿಸಿದಂತೆ

ಏ) ಪ್ರದೇಶಗಳ ವಿಸ್ತರಣೆ ವಿಷಯಕ್ಕೆ ಸಂಬಂಧಿಸಿದಂತೆ 

 

(12) ಕಾಫಿಪೋಸ ಮತ್ತು ಅಭಿಯೋಗ (ಆಡಳಿತ) 

(ಅ) ಕಾಫಿಪೋಸಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸರ್ಕಾರಿ ವಕೀಲರನ್ನು ನೇಮಕ ಮಾಡುವ ಬಗ್ಗೆ.

(ಆ) ಅಧೀನ ಅಭ್ಯಗಳ ಬಿಡುಗಡೆಗೆ ಸಂಬಂಧಿಸಿದ ವಿಷಯಗಳು.

(ಇ) ಸಲಹಾ ಮಂಡಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಭೆ ಕರೆಯುವ ಬಗ್ಗೆ.

 

(13) ವಿದೇಶಿಯರು ಮತ್ತು ರಹದಾರಿ 

ಅ) ವಿದೇಶಿಯರ ಪ್ರಯಾಣಾನುಮತಿ ಪತ್ರ (VISA) ವಿಸ್ತರಣೆ

ಆ) ಭಾರತಕ್ಕೆ ಹಿಂತಿರುಗಲು ಅಭ್ಯಂತರವಿಲ್ಲ (ನೋರಿ) ಪತ್ರ

ಇ) ಕ್ರಿಶ್ಚಿಯನ್ನರ ವಿವಾಹ ನೋಂದಣಿ ಹಾಗೂ ವಿವಾಹ ಪರವಾನಿಗೆ ನೀಡುವುದು

ಈ) ಭಾರತೀಯ ಪೌರತ್ವ ನೀಡುವುದು

ಉ) ಟಿಬೇಟಿಯನ್ ನಿರಾಶ್ರಿತರಿಗೆ ಸಂಬಂಧಪಟ್ಟ ವಿಷಯಗಳು

ಊ) ವಿದೇಶಿ ದೇಣಿಗೆ (ನಿಯಂತ್ರಣ) ಕಾಯಿದೆ ಮತ್ತು ನಿಯಮ

ಋ) ರಾಜ್ಯದಲ್ಲಿ ವಿದೇಶಿಯರ ವಾಸ ವಿಸ್ತರಣೆ

ಎ) ಪೊಲೀಸ್ ಅನುಮತಿ/ಪರವಾನಿಗೆ ಪ್ರಮಾಣ ಪತ್ರ ಮತ್ತು ವಿದೇಶಿಯರಿಗೆ ಸಂಬಂಧಿಸಿದ ಇತರೆ ವಿಷಯಗಳು

 

(14) ಅಪರಾಧ ಅಭಿಯೋಗಗಳು  -I 

ದಾವಣಗೆರೆ, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ಧಾರವಾಡ, ಬೆಳಗಾವಿ, ಗದಗ್, ಬೀದರ್, ಕೊಪ್ಪಳ, ಕಲಬುರಗಿ, ರಾಯಚೂರು ಜಿಲ್ಲೆಗಳ ಕ್ರಿಮಿನಲ್ ವ್ಯಾಜ್ಯಗಳಿಗೆ ಸಂಬಂಧಿಸಿದ ವಿಷಯಗಳನ್ನು ನೋಡಿಕೊಳ್ಳುತ್ತದೆ.

 

 (15) ಅಪರಾಧ ಅಭಿಯೋಗಗಳು  -II 

(ಎ) ಬೆಂಗಳೂರು ಸಿಟಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕ್ರಿಮಿನಲ್ ವ್ಯಾಜ್ಯಗಳಿಗೆ ಸಂಬಂಧಿಸಿದ ವಿಷಯಗಳನ್ನು ನೋಡಿಕೊಳ್ಳುತ್ತದೆ.

(ಬಿ) ಕೋಲಾರ, ತುಮಕೂರು, ಮಂಗಳೂರು, ಉಡುಪಿ, ಕಾರವಾರ, ಮೈಸೂರು, ಕೊಡಗು, ಚಿಕ್ಕಮಗಳೂರು, ಹಾಸನ, ಮಂಡ್ಯ ಜಿಲ್ಲೆಗಳ ಕ್ರಿಮಿನಲ್ ವ್ಯಾಜ್ಯಗಳಿಗೆ ಸಂಬಂಧಿಸಿದ ವಿಷಯಗಳನ್ನು ನೋಡಿಕೊಳ್ಳುತ್ತದೆ.

 

 (16) ಕಾನೂನು ಕೋಶದ ಮುಖ್ಯಸ್ಥರು 

             ಒಳಾಡಳಿತ ಇಲಾಖೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾನ್ಯ ಸವೋಚ್ಛ ನ್ಯಾಯಾಲಯ, ಉಚ್ಛ ನ್ಯಾಯಾಲಯ ಮತ್ತು ಕೆ.ಎ.ಟಿ.ಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡುತ್ತದೆ. 

    ಸರ್ಕಾರದ ಪರವಾಗಿ ನ್ಯಾಯಾಲಯಗಳಲ್ಲಿ ವಾದ ಮಂಡಿಸಲು ವಕೀಲರು ಹಾಜರಾಗಲು ದೃಢೀಕರಣ ಪತ್ರ ನೀಡುತ್ತದೆ.

 

(17) ಆಂತರಿಕ ಆಕ ಸಲಹೆಗಾರರು 

   ಒಳಾಡಳಿತ ಇಲಾಖೆಯ ಆಕ ವಿಷಯಗಳಿಗೆ ಸಂಬಂಧಿಸಿದಂತೆ ಮಾರ್ಗದರ್ಶನ ನೀಡಲು ಸರ್ಕಾರ  ಆಕ ಸಲಹೆಗಾರರನ್ನು ನೇಮಿಸಿದೆ. ಇವರು ಇಲಾಖೆಯ ಸಂಪೂರ್ಣ ಆಕ ವಿಷಯಗಳಿಗೆ ಮತ್ತು ಆಯವ್ಯಯಕ್ಕೆ ಸಂಬಂಧಿಸಿದಂತೆ ಮಾರ್ಗದರ್ಶನ ನೀಡುತ್ತಾರೆ.

 

III. ಒಳಾಡಳಿತ ಇಲಾಖೆಯ ಆಡಳಿತಾತ್ಮಕ ನಿಯಂತ್ರಣಕ್ಕೆ ಒಳಪಡುವ ಇಲಾಖೆಗಳು/ಸಂಸ್ಥೆಗಳು 

ಅ) ಪೊಲೀಸ್ ಇಲಾಖೆ.

ಆ) ಕಾರಾಗೃಹಗಳ ಇಲಾಖೆ

ಇ) ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಳಾಖೆ.

ಈ) ಗೃಹ ರಕ್ಷಕ ದಳ ಮತ್ತು ಪೌರ ರಕ್ಷಣ ಇಲಾಖೆ.

ಉ) ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ.

ಊ) ಅಭಿಯೋಗಗಳು ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ.

ಋ) ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ದಿ ನಿಗಮ ನಿಯಮಿತ. 

 

(1) ಪೊಲೀಸ್ ಇಲಾಖೆ : 

ಪೊಲೀಸ್ ಇಲಾಖೆಯ ಸಂಯೋಜನೆ, ಉದ್ದೇಶ, ಕಾರ್ಯ ಮತ್ತು ಕೆಲಸಗಳು: 

ಸಂಯೋಜನೆ :

ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು  ಇವರು ರಾಜ್ಯದ ಪೊಲೀಸ್ ಇಲಾಖೆಯ ಮುಖ್ಯಸ್ಥರಾಗಿರುತ್ತಾರೆ. ಇವರ ಕೆಳಗೆಪೊಲೀಸ್ ಇಲಾಖೆಯ ವಿವಿಧ ವಿಭಾಗದ ಮುಖ್ಯಸ್ಥರಾಗಿ ಪೊಲೀಸ್ ಮಹಾ ನಿರ್ದೇಶಕರು ಬರಲಿದ್ದು ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ಮತ್ತು ತಾಂತ್ರಿಕ ಸೇವೆಗಳು, ಆಡಳಿತ, ಗುಪ್ತಚರ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್, ನೇಮಕಾತಿ ಮತ್ತು ತರಬೇತಿ, ಸಂಚಾರ, ದೂರಸಂಪರ್ಕ ಮತ್ತು ಆಧುನೀಕರಣ ಮತ್ತು ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯಗಳಂತಹ ನಿರ್ದಿಷ್ಟ ಕಾರ್ಯನಿರ್ವಹಣೆಗೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು ಮುಖ್ಯಸ್ಥರಾಗಿರುತ್ತಾರೆ. ಬೆಂಗಳೂರು ನಗರ, ಹುಬ್ಬಳ್ಳಿ-ಧಾರವಾಡ, ಮೈಸೂರು ನಗರ ಮತ್ತು ಮಂಗಳೂರು ನಗರ ಇವು ನಾಲ್ಕು ಪೊಲೀಸ್ ಕಮೀನಷರೇಟ್ಗಳಾಗಿರುತ್ತವೆ. ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರ ನಂತರ ಪೊಲೀಸ್ ಮಹಾ ನಿರೀಕ್ಷಕರು ಬರಲಿದ್ದು, ನಿರ್ದಿಷ್ಟ ವಿಷಯಗಳಿಗೆ ಇರುವ ಆರಕ್ಷಕ ಮಹಾ ನಿರೀಕ್ಷಕನ್ನು ಹೊರತುಪಡಿಸಿ ವಲಯಗಳ ಮುಖ್ಯಸ್ಥರಾಗಿ ಆರು ಆರಕ್ಷಕ ಮಹಾ ನಿರೀಕ್ಷಕರು ಇರುತ್ತಾರೆ. ಜಿಲ್ಲೆ ಕೇಂದ್ರಗಳಡಿ 3 - 6 ವಲಯಗಳು ಬರಲಿವೆ. ಪ್ರತಿ ಜಿಲ್ಲೆಗೆ ಒಬ್ಬ ಪೊಲೀಸ್ ಅಧೀಕ್ಷಕರು ಅಧಿಕಾರಿಯು ಮುಖ್ಯಸ್ಥರಾಗಿರುತ್ತಾರೆ. 

ಉದ್ದೇಶ: 

ಪೊಲೀಸ್ ಇಲಾಖೆಯ ಉದ್ದೇಶಗಳು: 

ಅ) ಅಪರಾಧ ಮತ್ತು ಸಮಾಜಾತುಕ ತತ್ವಗಳಿಂದ ಸಾರ್ವಜನಿಕರನ್ನು ಕಾಪಾಡುವುದು ಮತ್ತು ಸಮಾಜದಲ್ಲಿನ ಜೀವನ ಗುಣಮಟ್ಟವನ್ನು ಸುಧಾರಣೆ ಮಾಡುವುದು.

ಆ) ಸಮಾಜದ ಉತ್ತಮ ನಡವಳಿಕೆ, ಬೆಂಬಲ ಮತ್ತು ಸಕ್ರೀಯ ಸಹಯೋಗವನ್ನು ಪಡೆಯುವುದು

ಇ) ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಇತರೆ ವಿಭಾಗಗಳೊಂದಿಗೆ ಸಮನ್ವಯ ಮಾಡುವುದು

ಈ) ಜಾತಿ, ಧರ್ಮ, ಸಮಾಜಿಕ, ಆಕ ಸ್ಥಿತಿ ಮತ್ತು ರಾಜಕೀಯ ಸಂಬಂಧಗಳನ್ನು ಲೆಕ್ಕಿಸದೆ ಎಲ್ಲರಿಗೂ ಸಮಾನವಾದ ಚಿಕಿತ್ಸೆಯನ್ನು ಒದಗಿಸುವುದು.

ಉ) ಮಾನವ ಹಕ್ಕುಗಳನ್ನು ಪ್ರೋತ್ಸಾಹಿಸುವುದು ಮತ್ತು ಮಕ್ಕಳು, ಹಿರಿಯ ನಾಗರೀಕರು ಮತ್ತು ದುರ್ಬಲ ವರ್ಗಗಳಿಗೆ ವಿಶೇಷ ಗಮನವನ್ನು ನೀಡುವುದು.

ಊ) ವೃತ್ತಿಪರ ಜ್ಞಾನ, ಕೌಶಲ್ಯ ಮತ್ತು ವರ್ತನೆಗಳನ್ನು ಸುಧಾರಿಸಲು ಮತ್ತು ಆಧುನಿಕ ವಿಧಾನಗಳನ್ನು ಅಳವಡಸಿಕೊಳ್ಳಲು ಪ್ರಯತ್ನಿಸುವುದು.

ಋ) ಸಮಗ್ರತೆ, ನಿಷ್ಪಕ್ಷಪಾತ ಮತ್ತು ದಕ್ಷತೆಗೆ ಒತ್ತು ನೀಡುವ ಮೂಲಕ ಪೊಲೀಸ್ ಕರ್ತವ್ಯದಲ್ಲಿ ವೃತ್ತಿಪರ ಮೌಲ್ಯಗಳನ್ನು ಬೆಳೆಸಿಕೊಳ್ಳುವುದು

 

(2) ಕಾರಾಗೃಹ ಇಲಾಖೆ  : 

ಉದ್ದೇಶ:

      ಕಾರಾಗೃಹಗಳು ಅಪರಾಧ ನ್ಯಾಯ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದು, ಬಂದಿಗಳ ಪಾಲಕರಾಗಿ ಕಾರ್ಯನಿರ್ವಹಿಸುತ್ತವೆ. ಸೆರೆವಾಸ ಶಿಕ್ಷೆಯ ಉದ್ದೇಶ ಮತ್ತು ಸಮರ್ಥನೆಗಳು ಸಮಾಜವನ್ನು ಅಪರಾಧಗಳಿಂದ ರಕ್ಷಿಸುವುದಾಗಿರುವಾಗ, ಖೈದಿಗಳೊಂದಿಗಿನ ಪ್ರತೀಕಾರ ಮತ್ತು ದಂಡನಾತ್ಮಕ ವಿಧಾನಗಳ ವರ್ತನೆಯು ಆಧುನಿಕ ಪ್ರಗತಿಶೀಲ ಸಮಾಜದಲ್ಲಿ ಸೂಕ್ತವಾದ ಅಥವಾ ಅಪೇಕ್ಷಣೀಯವಾಗಿರುವುದಿಲ್ಲ. ಕಾರಾಗೃಹಗಳು ಖೈದಿಗಳೊಂದಿಗೆ ಮಾನವೀಯವಾಗಿ ಮತ್ತು ಅವರ ಮಾನವ ಹಕ್ಕುಗಳನ್ನು ಗೌರವಿಸುವುದರೊಂದಿಗೆ ಚಿಕಿತ್ಸಕ ಮತ್ತು ತಿದ್ದುಪಡಿ ಕೇಂದ್ರಗಳಾಗಿ ಕಾರ್ಯನಿರ್ವಹಿಸುವುದನ್ನು ನಿರೀಕ್ಷಿಸಿದೆ.

 

(3) ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ: 

ಉದ್ದೇಶ:

ಅ) ಅಗ್ನಿ ಸುರಕ್ಷತಾ ಶಿಕ್ಷಣ, ಅಗ್ನಿ ತಡೆ ಮತ್ತು ಅಗ್ನಿಶಮನ ಸೇವೆಗಳನ್ನು ಒದಗಿಸುವುದು.

ಆ) ಅಪಾತ ಮತ್ತು ವಿಕೋಪ ಪರಿಸ್ಥಿತಿ ಇತ್ಯಾದಿ ಸಂದರ್ಭದಲ್ಲಿ ಸಂರಕ್ಷಣಾ ಕಾರ್ಯಚರಣೆಗಳನ್ನು ಕೈಗೊಳ್ಳುವುದು.

ಇ) ತುರ್ತು ಸ್ಥಿತಿಯಲ್ಲಿ ವೈದ್ಯಕೀಯ ಸೇವೆಗಳನ್ನು ಒದಗಿಸುವುದು. 

ಕಾರ್ಯಕ್ರಮಗಳು:

ಇಲಾಖೆಯ ದಿನನಿತ್ಯದ ಕಾರ್ಯಗಳು ಮತ್ತು ಚಟುವಟಿಕೆಗಳನ್ನು ಈ ಕೆಳಕಂಡಂತೆ ವಿಂಗಡಿಸಲಾಗಿದೆ. 

ಅ) ಕಾರ್ಯಾಚರಣೆ: ಇಲಾಖೆಯಲ್ಲಿ 3 ಪ್ರಾಂತ್ಯಗಳಿದ್ದು (ಬೆಂಗಳೂರಿನಲ್ಲಿ 02, ಮೈಸೂರು 01, ಮಂಗಳೂರು 01, ಹುಬ್ಬಳ್ಳಿ 01 ಮತ್ತು ಕಲಬುರಗಿ 01) ಪ್ರತಿಯೊಂದು ಪ್ರಾಂತ್ಯವು ಮುಖ್ಯ ಅಗ್ನಿಶಾಮಕ ಅಧಿಕಾರಿಯ ಮೇಲುಸ್ತುವಾರಿಯಲ್ಲಿರುತ್ತದೆ. ವಲಯಗಳು ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿಗಳ ಮೇಲುಸ್ತುವಾರಿಯಲ್ಲಿರುತ್ತದೆ. 3 ರಿಂದ 4 ಜಿಲ್ಲೆಗಳು ಒಬ್ಬ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿಯ ವ್ಯಾಪ್ತಿಯಲ್ಲಿ ಬರುತ್ತದೆ.

 

ಆ) ತರಬೇತಿ:ಬೆಂಗಳೂರಿನಲ್ಲಿ ಸುಸಜ್ಜಿತವಾದ ಆರ್.ಎ. ಮುಂಡ್ಕೂರ್ ಅಗ್ನಿಶಾಮಕ ಮತ್ತು ತುರ್ತು ಸೇವಾ ಅಕಾಡೆಮಿ ಇರುತ್ತದೆ. ಇಲ್ಲಿ ಹೊಸದಾಗಿ ನೇಮಕ ಹೊಂದಿದ ಅಗ್ನಿಶಾಮಕ ಠಾಣಾಧಿಕಾರಿ, ಅಗ್ನಿಶಾಮಕ, ಅಗ್ನಿಶಾಮಕ ಚಾಲಕ ಮತ್ತು ಅಗ್ನಿಶಾಮಕ ತಂತ್ರಜ್ಞರಿಗೆ ಮೂಲ ತರಬೇತಿಯನ್ನು ಹಾಗೂ ಸೇವಾ ನಿರತ ಅಧಿಕಾರಿ/ಸಿಬ್ಬಂದಿಗಳಿಗೆ ಪುನರ್ಮನನ ತರಬೇತಿಯನ್ನು ನೀಡಲಾಗುತ್ತದೆ. 

ಇ) ನಿರ್ವಹಣೆ: ಇಲಾಖೆಯ ಅಗ್ನಿಶಮನ ವಾಹನಗಳು ಮತ್ತು ಪಂಪ್ಗಳನ್ನು ಸುಸಜ್ಜಿತವಾದ ಕಾರ್ಯಾಗಾರ ಹಾಗೂ ನುರಿತ ತಂತ್ರಜ್ಞರಿಂದ ನಿರ್ವಹಣೆ ಮಾಡಲಾಗುತ್ತಿದೆ. 

ಈ) ಸಂವಾಹನ: ಇಲಾಖೆಯ ಸಂಪರ್ಕ ವ್ಯವಸ್ಥೆಗಾಗಿ ಸುಸಜ್ಜಿತವಾದ ವೈರಲೇಸ್ ಸಂವಾಹನ ವ್ಯವಸ್ಥೆಯನ್ನು ಹೊಂದಿರುತ್ತದೆ.

ಅಗ್ನಿಶಾಮಕ ಕಟ್ಟಡಗಳು:

ಪ್ರಸ್ತುತ ಇರುವ 212 ಅಗ್ನಿಶಾಮಕ ಠಾಣೆಗಳಲ್ಲಿ 173 ಅಗ್ನಿಶಾಮಕ ಠಾಣೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. 17 ಹೊಸ ಕಟ್ಟಡಗಳನ್ನು ನಿರ್ಮಾಣ ಕಾರ್ಯ ಕೈಗೊಳ್ಳಲಾಗುತ್ತಿದೆ. 15 ಅಗ್ನಿಶಾಮಕ ಠಾಣೆಗಳು ತಾತ್ಕಾಲಿಕ ಕಟ್ಟಡದಲ್ಲಿ ಹಾಗೂ 07 ಅಗ್ನಿಶಾಮಕ ಠಾಣೆಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. 

 

(4) ಗೃಹರಕ್ಷಕ ಮತ್ತು ಪೌರರಕ್ಷಣಾ ಇಲಾಖೆ:

ಇದೊಂದು ಸಹಾಯಕ ಸೇವೆಗೆ ಸಂಬಂಧಿಸಿದಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆ ಪ್ರಕೃತಿ ವಿಕೋಪಗಳಾದ ಭೂಕಂಪ, ಪ್ರವಾಹ ಮತ್ತು ಇತರೇ ಮಾನವ ನಿರ್ಮಿತ ಅವಡಗಳಲ್ಲಿ ಸಾರ್ವಜನಿಕರ ಜೀವ ಮತ್ತು ಆಸ್ತಿ ರಕ್ಷಣೆಯನ್ನು ಮಾಡುವಲ್ಲಿ ಪೊಲೀಸರಿಗೆ ಸ್ವಯಂ ಸೇವೆಯ ಮುಖಾಂತರ ಸಹಾಯ ಮಾಡಲಾಗುತ್ತಿದೆ. 

(5) ಸೈನಿಕ ಕಲ್ಯಾಣ ಮತ್ತು ಪುನರ್ವಸತಿ:

ಉದ್ದೇಶ:

ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯು ಮಾಜಿ ಸೈನಿಕರು ಮತ್ತು ಅವಲಂಬಿತರ, ಯುದ್ಧ ಗಾಯಾಳುಗಳು, ಯುದ್ಧದಂತಹ ಕಾರ್ಯಚರಣೆಯಲ್ಲಿ ಮಡಿದ ವೀರ ಯೋಧರ ಕುಟುಂಬದವರಿಗೆ ಪುನರ್ವಸತಿ ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಮಾಜಿ ಸೈನಿಕರುಗಳನ್ನು ಮೂಲ ಸ್ಥರದಲ್ಲಿ ಪುನರ್ ಕೌಶಲ್ಯ ಮತ್ತು ತರಬೇತಿ ನೀಡಿ ಅವರುಗಳಿಗೆ ಅವಶ್ಯವಿರುವ ಸೂಕ್ತ ಸಹಾಯವನ್ನು ನೀಡಿ ಸಮಾಜದಲ್ಲಿ ಗೌರವಯುತವಾಗಿ ಬಾಳ್ವೆ ನಡೆಸಲು ಸಹಕಾರ ನೀಡುವುದು ಈ ಇಲಾಖೆಯ ಮೂಲ ಉದ್ದೇಶವಾಗಿದೆ.

 

(6) ಅಭಿಯೋಗಗಳು ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ. 

ಈ ಇಲಾಖೆಯು ೋರ ಅಪರಾಧಗಳ ಅಭಿಯೋಜನೆಯನ್ನು ಪರಿಣಾಮಕಾರಿಯಾಗಿ ನಡೆಸುವುದು ಮತ್ತು ಪೊಲೀಸರು ತನಿಖೆಯ ಸಮಯದಲ್ಲಿ ಪೂರ್ಣ ಪ್ರಮಾಣದ ಸಾಕ್ಷಿಗಳನ್ನು ಸಂಗ್ರಹಿಸಿ ದೋಷಾರೋಪಣ ಪತ್ರವನ್ನು ಸಲ್ಲಿಸಲು ಮಾರ್ಗದರ್ಶನ ನೀಡುತ್ತದೆ. ಮ್ಯಾಜಿಸ್ಟ್ರೇಟ್ ಕೋರ್ಟ್ ಮತ್ತು ಸೆಷನ್ಸ್ ನ್ಯಾಯಾಲಯಗಳಲ್ಲಿ ನಡೆಯುವ ಸಿವಿಲ್ ವ್ಯಾಜ್ಯಗಳನ್ನು ನೋಡಿಕೊಳ್ಳುತ್ತದೆ. 

 

(7) ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ದಿ ನಿಗಮ ನಿಯಮಿತ.  

ಕೆ.ಎಸ್.ಪಿ.ಎಚ್ ಮತ್ತು ಐ.ಡಿ.ಸಿ.ಎಲ್ ಸಂಸ್ಥೆಯು 1987 ರಲ್ಲಿ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಕಟ್ಟಡಗಳನ್ನು ಕಟ್ಟುವ ಉದ್ದೇಶದಿಂದ ಸ್ಥಾಪನೆಯಾಗಿರುತ್ತದೆ.

 

IV. ಒಳಾಡಳಿತ ಇಲಾಖೆಯ ಸಿಬ್ಬಂದಿಗಳು ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸಲು ಉಪಯೋಗಿಸುವ ಕಾಯ್ದೆಗಳು, ನಿಯಮಗಳು, ರೆಗ್ಯುಲೇಷನ್ಸ್, ಸೂಚನೆಗಳು ಮತ್ತು ಕೈಪಿಡಿಗಳು

 

(i) ಕಾಯ್ದೆಗಳು:  

(1)  ರಾಜ್ಯ ಪೊಲೀಸ್ ಕಾಯ್ದೆ 1963.

(2)  ಗೃಹರಕ್ಷಕ ದಳ ಕಾಯ್ದೆ 1962

(3)  ಕರ್ನಾಟಕ ಸಿನಿಮಾ ಕಾಯ್ದೆ 1963

(4)  ಕರ್ನಾಟಕ ಸಿನಿಮಾ (ರೆಗ್ಯುಲೇಷನ್) ಕಾಯ್ದೆ 1964

(5)  ಕರ್ನಾಟಕ ಕಾರಾಗೃಹಗಳ ಕಾಯ್ದೆ 1963

(6)  ನಾಗರೀಕ ಹಕ್ಕುಗಳ ಕಾಯ್ದೆ 1964

(7)  ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ (ದೌರ್ಜನ್ಯ) ಕಾಯ್ದೆ 2002.

(8)  ಕಛೇರಿ ರಹಸ್ಯ ಕಾಯ್ದೆ.

(9)  ಅಗತ್ಯ ಸೇವೆಗಳ ನಿರ್ವಹಣೆ ಕಾಯ್ದೆ 1968.

(10)  ಕಾಫಿಪೋಸ ಕಾಯ್ದೆ 1974.

(11) ವಿದೇಶಿ ವಿನಿಮಯ ಸಂರಕ್ಷಣೆ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (ಕಾಫಿಪೋಸ)

(12) ಕ್ರಿಶ್ಚಿಯನ್ ಮ್ಯಾರೇಜ್ ರಿಜಿಸ್ಟ್ರೇಷನ್ ಕಾಯ್ದೆ.

(13) ಕರ್ನಾಟಕ ನಾಗರೀಕ ಸೇವಾ ನಿಯಮಗಳು (ಆರ್ಪಿಪಿಪಿ) ಕಾಯ್ದೆ (1957-2008)

(14) ಕರ್ನಾಟಕ ರಾಜ್ಯ ಸೇವೆಗಳು (ವಯಸ್ಸನ್ನು ನಿರ್ಧರಿಸುವ) ಕಾಯ್ದೆ 1974

(15) ಕರ್ನಾಟಕ ಲೋಕಾಯುಕ್ತ ಕಾಯ್ದೆ.

(16) ಕರ್ನಾಟಕ ಆಡಳಿತ ನ್ಯಾಯಮಂಡಳಿ ಕಾಯ್ದೆ.

(17) ಕರ್ನಾಟಕ ಪ್ರಿವೆನ್ಷನ್ ಆಫ್ ಡೇಂಜರಸ್ ಆಕ್ಟಿವಿಟೀಸ್ ಆಫ್ ಬೂಟ್ಲೆಗರ್ಸ್, ಡ್ರಗ್ ಅಫೆಂಡರ್ಸ್, ಗ್ಯಾಂಬಲರ್ಸ್, ಗೂಂಡಾಸ್ (ಇಮ್ಮಾರಲ್ ಟ್ರಾಫಿಕ್ ಅಫೆಂಡರ್ಸ್, ಸ್ಲಮ್ ಗ್ರ್ಯಾಬರ್ಸ್ &ವಿಡಿಯೋ ಅಥವಾ ಆಡಿಯೋ ಪೈರೇಟ್ಸ್) ಆಕ್ಟ್, 1985.

(18) ಶಸ್ತ್ರಾಸ್ತ್ರ ಕಾಯ್ದೆ 1959

(19) ಪ್ರೈವೇಟ್ ಸೆಕ್ಯುರಿಟಿ ಏಜೆನ್ಸೀಸ್ (ರೆಗ್ಯುಲೇಷನ್) ಕಾಯ್ದೆ 2005.

(20) ನ್ಯಾಷನಲ್ ಸೆಕ್ಯುರಿಟಿ ಕಾಯ್ದೆ 1980

(21) ತನಿಖಾ ಆಯೋಗಗಳ ಕಾಯ್ದೆ 1952

(22) ಅಗ್ನಿ ಸೇವೆಗಳ ಕಾಯ್ದೆ 1964

(23) ವಿದೇಶಿ ಹೂಡಿಕೆ (ರೆಗ್ಯುಲೇಷನ್) ಕಾಯ್ದೆ 1976

(24) ಕರ್ನಾಟಕ ಸಂಟಿತ ಅಪರಾಧಗಳ ನಿಯಂತ್ರಣ ಕಾಯ್ದೆ 2000.

 

(ii) ನಿಯಮಗಳು 

(1) ಕರ್ನಾಟಕ ರಾಜ್ಯ ಪೊಲೀಸ್ (ಶಿಸ್ತು ನಡವಳಿಗಳು) ನಿಯಮಗಳು 1965

(2) ಕರ್ನಾಟಕ ಕಾರಾಗೃಹಗಳ ನಿಯಮಗಳು 1964

(3) ಕರ್ನಾಟಕ ಸಿನಿಮಾ (ರೆಗ್ಯುಲೇಷನ್) ನಿಯಮ 1971

(4) ಕರ್ನಾಟಕ ನಾಗರೀಕ ಸೇವೆಗಳು (ಸಿಸಿಎ) ನಿಯಮಗಳು 1957

(5) ಕರ್ನಾಟಕ ಸರ್ಕಾರಿ ನೌಕರರು (ಜೇಷ್ಠತೆ) ನಿಯಮ 1957

(6) ಕರ್ನಾಟಕ ನಾಗರೀಕ ಸೇವೆಗಳು (ಸಾಮಾನ್ಯ ನೇಮಕಾತಿ ನಿಯಮ) 1977

(7) ಕರ್ನಾಟಕ ನಾಗರೀಕ ಸೇವೆಗಳು (ಬೆರಳಚ್ಚುಗಾರರ/ಶೀ್ರಲಿಪಿಗಾರರ ನೇಮಕಾತಿ) ನಿಯಮ 1983

(8) ಕರ್ನಾಟಕ ನಾಗರೀಕ ಸೇವೆಗಳು (ನಡತೆ) ನಿಯಮಗಳು 1966

(9) ಕರ್ನಾಟಕ ನಾಗರೀಕ ಸೇವೆಗಳು (ಆರ್ಪಿಪಿ &ಪಿ) ನಿಯಮಗಳು 1978

(10) ಕರ್ನಾಟಕ ನಾಗರೀಕ ಸೇವೆಗಳು (ವೈದ್ಯಕೀಯ ರಜೆ) ನಿಯಮಗಳು 1963

(11) ಕರ್ನಾಟಕ ನಾಗರೀಕ ಸೇವೆಗಳು (ಬೆರಳಚ್ಚುಗಾರರು &ಕಿರಿಯ ಸಹಾಯಕರು/ಎಸ್ಡಿಎ, ಕೇಡರ್ ಬದಲಾವಣೆ) ನಿಯಮಗಳು 1985.

(12) ಕರ್ನಾಟಕ ನಾಗರೀಕ ಸೇವೆಗಳು (ಗ್ರೂಪ್ ಎ &ಬಿ ಎಸ್ಸಿ/ಎಸ್ಟಿ ಅಭ್ಯಗಳ ವಿಶೇಷ ನೇಮಕಾತಿ) ನಿಯಮಗಳು 1985.

(13) ಕರ್ನಾಟಕ ನಾಗರೀಕ ಸೇವೆಗಳು (ಕಾರ್ಯ ನಿರ್ವಹಣೆ ವರದಿ) ನಿಯಮಗಳು 1994.

(14) ಕರ್ನಾಟಕ ಲೋಕಸೇವಾ ಆಯೋಗ ರೆಗ್ಯುಲೇಷನ್.

(15) ಕರ್ನಾಟಕ ಅಗ್ನಿಶಾಮಕ (ಶಿಸ್ತು ಕ್ರಮ &ಸೇವೆಯಿಂದ ತೆಗೆಯುವಿಕೆ) ನಿಯಮಗಳು 1971.

(16) ಶಸ್ತ್ರಾಸ್ತ್ರ ನಿಯಮಗಳು 1962

(17) ಕರ್ನಾಟಕ ಗೃಹ ರಕ್ಷಕರ ನಿಯಮಗಳು 1963  

 

(iii) ಸೂಚನೆಗಳು, ಕೈಪಿಡಿಗಳು ಮತ್ತು ಇತರೆ. 

(1)   ಕರ್ನಾಟಕ ಕಾರಾಗೃಹ ಕೈಪಿಡಿ 1978

(2)    ಕರ್ನಾಟಕ ಸರ್ಕಾರ ಸಚಿವಾಲಯ ಕೈಪಿಡಿ

(3)    ಕರ್ನಾಟಕ ಅನಿಶ್ಚಿತ ಖರ್ಚು ಸಂಕೇತ (ಸಂಹಿತೆ)

(4)    ಕರ್ನಾಟಕ ಆಕ ಸಂಕೇತ(ಸಂಹಿತೆ)

(5)    ಕರ್ನಾಟಕ ಖಜಾನೆ ಸಂಕೇತ (ಸಂಹಿತೆ)

(6)    ಕ್ರಿಮಿನಲ್ ಪ್ರಕ್ರಿಯೆ ಸಂಕೇತ(ಸಂಹಿತೆ)

(7)    ಮಾಜಿ ಸೈನಿಕರಿಗೆ ಮೀಸಲಾತಿ

(8)    ಮಹಿಳೆಯರಿಗೆ ಮೀಸಲಾತಿ

(9)    ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ರೋಸ್ಟರ್ ಮೀಸಲಾತಿ

(10)  ಇಲಾಖಾ ಮುಂಬಡ್ತಿ ಸಮಿತಿ

(11)   ಸರ್ಕಾರದಿಂದ ಆಗಿಂದಾಗ್ಗೆ ಹೊರಡಿಸುವ ಆದೇಶಗಳು, ಅಧಿಕೃತ ಜ್ಞಾಪನ, ಸುತ್ತೋಲೆಗಳು ಮತ್ತು ಇತರೆ ಸಾಮಾನ್ಯ ಸೂಚನೆಗಳು

(12)  ಕರ್ನಾಟಕ ಪೊಲೀಸ್ ಕೈಪಿಡಿ

(13)   ಗೃಹ ರಕ್ಷಕದಳ ಕೈಪಿಡಿ

ಇತ್ತೀಚಿನ ನವೀಕರಣ​ : 12-07-2019 04:30 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಒಳಾಡಳಿತ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080